ಮಹೇಶ್ ಮಹದೇವ್ ಭಾರತೀಯ ಸಂಗೀತ ಸಂಯೋಜಕರು, ಗೀತರಚನಾಕಾರು ಹಾಗೂ ಗಾಯಕರು.ಇವರು ತಮಿಳು ಹಾಗೂ ಕನ್ನಡ ಚಲನಚಿತ್ರಗಳಲ್ಲಿ ಸಂಗೀತ ನಿರ್ದೇಶಕರು, ಗೀತರಚನಾಕಾರರಾಗಿದ್ದಾರೆ. ಕರ್ನಾಟಕ ಸಂಗೀತ ಮತ್ತು ಹಿಂದುಸ್ತಾನಿ ಸಂಗೀತದಲ್ಲಿ ೫೦ಕ್ಕೂ ಹೆಚ್ಚು ಹೊಸ ರಾಗಗಳನ್ನು ಸೃಷ್ಟಿಸಿ ಅದರಲ್ಲಿ ಅನೇಕ ವರ್ಣಗಳು, ಕೃತಿಗಳು ಹಾಗೂ ಭಕ್ತಿಗೀತೆಗಳ ಸಂಯೋಜನೆ ಮಾಡಿದ್ದಾರೆ ಇವರು ಕನ್ನಡ, ತೆಲುಗು, ತಮಿಳು, ಹಿಂದಿ, ಇಂಗ್ಲೀಷ್, ಮರಾಠಿ, ಸಂಸ್ಕೃತ ಭಾಷೆಗಳಲ್ಲಿ ಸಂಗೀತ ಸಂಯೋಜಿಸಿದ್ದಾರೆ == ಆರಂಭಿಕ ಜೀವನ == ಮಹೇಶ್ ಮಹದೇವ್ ಅಕ್ಟೋಬರ್ ೨೮, ೧೯೮೧ ಬೆಂಗಳೂರಿನಲ್ಲಿ ಜನಿಸಿದರು. ತಂದೆ (ಮಹದೇವ ರಾವ್), ತಾಯಿ (ಮಂಜುಳ ಜಾಧವ್).ಇವರು ಲಂಡನ್ ನ ರಾಯಲ್ ಸ್ಕೂಲ್ ಆಫ್ ಮ್ಯೂಸಿಕ್ ನಲ್ಲಿ ಪಾಶ್ಚಾತ್ಯ ಸಂಗೀತ ತರಬೇತಿ ಪಡೆದಿದ್ದಾರೆ, ಶಾಸ್ತ್ರೀಯ ಸಂಗೀತದಲ್ಲಿ ಔಪಚಾರಿಕವಾಗಿ ತರಬೇತಿ ಪಡೆದಿಲ್ಲದಿದ್ದರೂ ಇವರದ್ದು ಬಾಲಪ್ರತಿಭೆ. ಹಿಂದುಸ್ತಾನಿ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಅನೇಕ ಹೊಸ ರಾಗಗಳನ್ನು ಸೃಷ್ಟಿಸಿ ಅದರಲ್ಲಿ ಅನೇಕ ವರ್ಣಗಳು, ಕೃತಿಗಳು, ಬಂದಿಶ್ ಗಳು ಹಾಗೂ ಗೀತೆಗಳನ್ನು ರಚಿಸಿ ಸಂಗೀತ ಸಂಯೋಜನೆಗಳ ಕೊಡುಗೆ ನೀಡಿದ್ದಾರೆ. ಇವರು ಶಿವಶಕ್ತಿ ಎಂಬ ಸಂಸ್ಥೆ ಸ್ಥಾಪಿಸಿ ಹಲವಾರು ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ೨೦೧೦ ರಲ್ಲಿ ಬೆಂಗಳೂರಿನಲ್ಲಿ ಇವರ ಸಾರಥ್ಯದಲ್ಲಿ ನಡೆದ ಬಾಲಿವುಡ್ ನಟ ಮನೋಜ್ ಕುಮಾರ್, ಭಾರತಿ ವಿಷ್ಣುವರ್ಧನ್ ಉಪಸ್ಥಿತಿಯ "ಮಧುರ್ ಸಂಗೀತ್ ಸಂಗೀತ ಕಾರ್ಯಕ್ರಮ, ೨೦೧೫ ಇವರ ಸಾರಥ್ಯದಲ್ಲಿ ಬೆಂಗಳೂರಿನಲ್ಲಿ ನಡೆದ ಚಲನಚಿತ್ರ ಗೀತೆ ಹಾಗೂ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಸಂಮಿಲನದ "ಗೀತ್ ಬಂದಿಶ್ ಮಿಲನ್" ಕಾರ್ಯಕ್ರಮ ಗಮನಾರ್ಹವು. ಇವರ ಗಾಯಕಿ ಪ್ರಿಯದರ್ಶಿನಿಯೊಂದಿಗೆ ಪ್ರಿಸಂ ಫೌಂಡೇಶನ್ ಎಂಬ ಕಲೆ ಮತ್ತು ಸಂಗೀತ ಸಂಸ್ಥೆಯ ಮೂಲಕ ವೈದ್ಯರು, ವಿದ್ಯಾರ್ಥಿಗಳು ಹಾಗೂ ಸಂಗೀತಾಸಕ್ತರಿಗೆ ಸಂಗೀತ ಕಲಿಸುತ್ತಿದ್ದಾರೆ. == ಹಿಂದೂಸ್ತಾನಿ ಸಂಗೀತ ವೃತ್ತಿಜೀವನ == 'ಭಾರತ ರತ್ನ' ಪಂಡಿತ್ ಭೀಮಸೇನ್ ಜೋಶಿ (ಭೀಮ್) ತಾನ್ ಸೇನ್ (ಸೇನ್) ರವರ ಹೆಸರಲ್ಲಿ ಸೃಷ್ಟಿಸಿದ 'ಭೀಮ್ ಸೇನ್' ಹೊಸ ರಾಗದಲ್ಲಿ 'ಗಿರಿಧರ್ ಗೋಪಾಲ್ ಶ್ಯಾಮ್' ವಿಲಾಂಬಿತ್ ಮತ್ತು ಮಧ್ಯ ಲಯ ಬಂದಿಶ್ ರಚಿಸಿದ್ದಾರೆ. ಇದೇ ರಾಗದಲ್ಲಿ 'ಮನ್ ಕೆ ಮಂದಿರ್ ಅಯೋರೇ' ದೃತ್ ಲಯ ಬಂದಿಶ್ ಸಂಯೋಜನೆ ಮಾಡಿದ್ದಾರೆ ಇವರು ಸೃಷ್ಟಿಸಿದ ಹೊಸ ರಾಗ ಮುಕ್ತಿಪ್ರದಾಯಿನಿಯಲ್ಲಿ 'ಧ್ಯಾನ್ ಕರು ಝಾತಾ' ಎಂಬ ಮರಾಠಿ ಅಭಾಂಗ್ ರಚನೆ ಮಾಡಿದ್ದಾರೆ == ಕರ್ನಾಟಕ ಸಂಗೀತ ವೃತ್ತಿಜೀವನ == ಮಹೇಶ್ ಮಹದೇವ್ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಪ್ರಚಲಿತವಿಲ್ಲದ ಹಲವಾರು ರಾಗಗಳಲ್ಲಿ ಕೃತಿ ರಚನೆ ಮಾಡಿದ್ದಾರೆ. ಶ್ರೀರಂಗಪ್ರಿಯ, ತಪಸ್ವಿನಿ, ಮಯೂರಪ್ರಿಯ, ಏಕಮುಖ, ಬಿಂದು ರೂಪಿಣಿ ಮತ್ತು ಹಲವಾರು ಹೊಸ ರಾಗಗಳನ್ನು ಸೃಷ್ಟಿಸಿ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಪರಿಚಯಿಸಿದ್ದಾರೆ. ಶ್ರೀಸ್ಕಂದ ಎಂಬ ಅಂಕಿತನಾಮದಲ್ಲಿ ಕರ್ನಾಟಕ ಸಂಗೀತದಲ್ಲಿ ವಿವಿಧ ತಾಳ ಪ್ರಕಾರ ಹಾಗೂ ರಾಗಗಳಲ್ಲಿ ಕೃತಿ, ತಿಲ್ಲಾನ, ಕೀರ್ತನೆಗಳು, ದಾಸರ ಪದಗಳನ್ನು ಸಂಯೋಜಿಸಿದ್ದಾರೆ. ಕರ್ನಾಟಕ ಸಂಗೀತದ ತ್ರಿಮೂರ್ತಿಗಳಲ್ಲಿ ಒಬ್ಬರಾದ ಸಂತ ತ್ಯಾಗರಾಜರ ಹೆಸರಿನಲ್ಲಿ "ಶ್ರೀ ತ್ಯಾಗರಾಜ"ಎಂಬ ಹೊಸ ರಾಗ ಸೃಷ್ಟಿಸಿ "ಶ್ರೀ ರಾಮಚಂದ್ರಂ ಭಜಾಮಿ" ಎಂಬ ಕರ್ನಾಟಕ ಸಂಗೀತದ ಕೃತಿಯನ್ನು ರಚಿಸಿದ್ದಾರೆ. ಕರ್ನಾಟಕ ಸಂಗೀತದ ದಿಗ್ಗಜರಾದ ಟಿ. ಎಂ. ತ್ಯಾಗರಾಜನ್ ರವರ ಜನ್ಮಶತಾಬ್ಧಿ ಸಲುವಾಗಿ ಅವರ ಹೆಸರಿನಲ್ಲಿ ತ್ಯಾಗರಾಜ ಮಂಗಳಂ ಎಂಬ ರಾಗ ಸೃಷ್ಟಿಸಿ "ಧ್ಯಾನ ಮೂಲಂ ಗುರು" ಎಂಬ ಉಗಾಭೋಗ ಹಾಗೂ ಕೃತಿಯನ್ನು ರಚಿಸಿ ಗೌರವ ಸಲ್ಲಿಸಿದ್ದಾರೆ. == ಚಲನಚಿತ್ರ ವೃತ್ತಿಜೀವನ == ರಾಯ್ ಲಕ್ಷ್ಮಿ, ಮುಖೇಶ್ ತಿವಾರಿ ಅಭಿನಯದ ಝಾನ್ಸಿ ಐ.ಪಿ.ಎಸ್ ಎಂಬ ಕನ್ನಡ ಚಲನ ಚಿತ್ರದಲ್ಲಿ ಗೀತರಚನೆ ಮಾಡಿದ್ದಾರೆಆನ್ಡ್ರಿಯಾ ಜರಿಮಿಯಾ, ಮನೋಬಾಲ, ಕೆ. ಏಸ್. ರವಿಕುಮಾರ್ ಅಭಿನಯದ ಮಾಳಿಗೈ' ಎಂಬ ತಮಿಳು ಚಿತ್ರಕ್ಕೆ ಸಂಗೀತ ಸಂಯೋಜಿನೆ ಮಾಡಿದ್ದಾರೆ ೨೦೨೨ರಲ್ಲಿ ತರೆ ಕಂಡ 'ಖಡಕ್ 'ಎಂಬ ಕನ್ನಡ ಚಿತ್ರದಲ್ಲಿ ಸಾಹಿತ್ಯ ಮತ್ತು ದೃಶ್ಯ ಸಂಯೋಜಕ ಮತ್ತು ಸಹಾಯಕ ಸಂಗೀತ ನಿರ್ದೇಶಕರಾಗಿದ್ದಾರೆ, ಮಂಜು ಮೂವೀಸ್ ನ 'ರಿದಂ' ಎಂಬ ಕನ್ನಡ ಚಲನಚಿತ್ರದಲ್ಲಿ ಸಂಗೀತ ನಿರ್ದೇಶಕನಾಗಿ ನಟನೆ ಮಾಡಿದ್ದಾರೆ. == ಮಹೇಶ್ ಮಹದೇವ್ ಸೃಷ್ಟಿಸಿರುವ ಹೊಸ ರಾಗಗಳು == ಮಹೇಶ್ ಮಹದೇವ್ ಕರ್ನಾಟಕ ಸಂಗೀತ ಮತ್ತು ಹಿಂದುಸ್ತಾನಿ ಸಂಗೀತದಲ್ಲಿ ೫೦ಕ್ಕೂ ಹೆಚ್ಚು ಹೊಸ ರಾಗಗಳನ್ನು ಸೃಷ್ಟಿಸಿದ್ದಾರೆ. ಅದರಲ್ಲಿ ಕೆಲವು ಈ ಕೆಳಕಂಡಂತಿದೆ. ಮುಕ್ತಿಪ್ರದಾಯಿನಿ - ವಕುಳಾಭರಣ ಜನ್ಯ ಶ್ರೀರಂಗಪ್ರಿಯ - ಸರಸಾಂಗಿ ಜನ್ಯ ಭೀಮ್ ಸೇನ್ - ಕೋಕಿಲಪ್ರಿಯ ಜನ್ಯ ಶ್ರೀಸ್ಕಂದ ಶ್ರೀ ತ್ಯಾಗರಾಜ, ಧರ್ಮಾವತಿ ಜನ್ಯ ಬಿಂದುರೂಪಿಣಿ, ನಾದ ಕಲ್ಯಾಣಿ - ಮೇಚ ಕಲ್ಯಾಣಿ ಜನ್ಯ ತಪಸ್ವಿ ಮಯೂರಪ್ರಿಯ, ಅಮೃತ ಕಲ್ಯಾಣಿ - ಮೇಚ ಕಲ್ಯಾಣಿ ಜನ್ಯ ರಾಜಸಾಧಕ- ಮೇಚ ಕಲ್ಯಾಣಿ ಜನ್ಯ ತ್ಯಾಗರಾಜ ಮಂಗಳಂ - ಗೌರಿಮನೋಹರಿ ಜನ್ಯ == ಡಿಸ್ಕೋಗ್ರಫಿ == == ಉಲ್ಲೇಖಗಳು ==